

1st December 2025

ಬೆಳಗಾವಿ: ಮನುಷ್ಯ ಆಧುನಿಕತೆ ಹೆಸರಿನಲ್ಲಿ ರಾಕ್ಷಸೀತನದತ್ತ ಹೊರಟಿದ್ದು, ಅದರಿಂದ ಹೊರತರುವ ಶಕ್ತಿ ಸಂಗೀತ, ಸಾಹಿತ್ಯಕ್ಕಿದೆ. ಸಾಹಿತ್ಯ ನಮ್ಮನ್ನು ನಾವು ತಿದ್ದಿ ತೀಡಿಕೊಳ್ಳುವ ಕೈಗನ್ನಡಿಯಾಗಿದೆ ಎಂದು ಖ್ಯಾತ ಕಾದಂಬರಿಕಾರ ರಾಘವೇಂದ್ರ ಪಾಟೀಲ ಹೇಳಿದರು.
ನಗರದ ಹಿಂದವಾಡಿಯಲ್ಲಿರುವ ಐಎಂಇಆರ್ ಸಭಾಭವನದ ಪ್ರಾಚಾರ್ಯ ಪ್ರಹ್ಲಾದಕುಮಾರ ಸಭಾಮಂಟಪದಲ್ಲಿ ಪರಿಮಳ ಪ್ರಕಾಶನ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಸಹಯೋಗದಲ್ಲಿ ರವಿವಾರ ನಡೆದ ಬೆಳಗಾವಿ ಸಾಹಿತ್ಯೋತ್ಸವ -2025ದಲ್ಲಿ ಲೇಖಕಿ ಗುರುದೇವಿ ಹುಲೆಪ್ಪನವರಮಠ ಅವರ 'ರವಿವಾರಾಯನಮಃ' ಲಲಿತ ಪ್ರಬಂಧ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಂಗೀತ, ಸಾಹಿತ್ಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಹೆಚ್ಚಿಸುವ ಕಾರ್ಯ ಆಗಬೇಕಿದೆ. ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಧುನಿಕತೆ ಎಂಬ ರೋಗವನ್ನು ನಿವಾರಿಸಲು ಒಳ್ಳೆಯ ಔಷಧಿಗಳಾಗಿವೆ. ಈ ಸಾಹಿತ್ಯೋತ್ಸವ ಔಷಧಿಯಾಗಿ ಕೆಲಸ ಮಾಡುತ್ತಲಿದೆ. ಸಂಗೀತ, ಸಾಹಿತ್ಯ, ಉಪನ್ಯಾಸದಿಂದ ಕೂಡಿದ ಸಾಹಿತ್ಯೋತ್ಸವ ನಮ್ಮ ಹೃದಯದಲ್ಲಿರುವ ಕಲ್ಮಶಗಳನ್ನು ತೆಗೆದು ಮನುಷ್ಯನನ್ನಾಗಿಸುವ ಕಾರ್ಯ ಮಾಡುತ್ತಲಿದೆ ಎಂದು ಹೇಳಿದರು.
ಸಾಹಿತಿ, ಅನುವಾದಕ ಡಾ. ಚಂದ್ರಕಾಂತ ಪೋಕಳೆ ಮಾತನಾಡಿ, ಮರಾಠಿ ಭಾಷಿಕರಲ್ಲಿ ನಡೆಯುವಂತೆ ಕನ್ನಡದಲ್ಲಿ ಸಮ್ಮೇಳನಗಳು ನಡೆಯುತ್ತಿಲ್ಲ. ಅವರಲ್ಲಿರುವ ಸಹಕಾರ ಇಲ್ಲಿ ಇಲ್ಲ. ಭಾಷಾ ಉತ್ಸವಗಳಲ್ಲಿ ಊರಿನ ಎಲ್ಲ ಜನರು ಪಾಲ್ಗೊಂಡು ಸಂಭ್ರಮಿಸುತ್ತಾರೆ. ಇಲ್ಲಿ ಸಾಹಿತ್ಯಕ ಉತ್ಸವಗಳು ಕೇವಲ ಸಾಹಿತಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಚಾಲಕ ಶಿರೀಷ ಜೋಶಿ ಮಾತನಾಡಿ, ಸಾಹಿತ್ಯೋತ್ಸವ-2025 ನಮ್ಮ ಮೊದಲ ಕಾರ್ಯಕ್ರಮವಾಗಿದ್ದು ಇದರಲ್ಲಿ ಸಂಗೀತ, ಸಾಹಿತ್ಯ,
ಪ್ರವಾರ
ನಾಟಕ ಹೀಗೆ ಎಲ್ಲವನ್ನೂ ಒಂದೆಡೆ ಸೇರಿಸುವ ಪ್ರಯತ್ನ ಮಾಡಿದ್ದೇವೆ. ಈ ಉತ್ಸವ ಪ್ರತಿವರ್ಷವೂ ನಡೆಯಲಿದ್ದು ಇದರ ಸದುಪಯೋಗವನ್ನು ಎಲ್ಲ ಬರಹಗಾರರು, ಸಾಹಿತ್ಯ ವಿದ್ಯಾರ್ಥಿಗಳು ಪಡೆಯಬೇಕೆಂದು ಹೇಳಿದರು.
ಶಾಸ್ತ್ರೀಯ ಸಂಗೀತ, ಬೆಳಗಾವಿ ಜಿಲ್ಲೆಯ ಕಾವ್ಯ ಪರಂಪರೆ, ಮಾಧ್ಯಮಗಳ ಸಾಂಸ್ಕೃತಿಕ ಹೊಣೆ, ನಾಕುತಂತಿಗೆ ಸುವರ್ಣ ಸಂಭ್ರಮ, ಸಾಹಿತಿಗಳ ಸಂಗ ಮೋಜಿನ ಪ್ರಸಂಗ, ವರ್ತಮಾನ ರಂಗಭೂಮಿ, ನಾನು ಮತ್ತು ನನ್ನ ಪುಸ್ತಕ, ಕುವೆಂಪು ಕಾದಂಬರಿಗಳು ಕುರಿತು ಗೋಷ್ಠಿಗಳು ನಡೆದವು.
ಡಾ. ಅಯ್ಯಪ್ಪಯ್ಯ ಹಲಗಲಿಮಠ ಅವರಿಂದ ಶಾಸ್ತ್ರೀಯ ಸಂಗೀತ ನಡೆಯಿತು. ತಬಲಾ ನಾರಾಯಣ ಗಣಾಚಾರಿ, ಹಾರ್ಮೋನಿಯಂ ಯೋಗೇಶ ರಾಮದಾಸ ಸಾಥ್ ನೀಡಿದರು. ರಾಗರಾಗಿಣಿ ತಂಡದವರು ಪ್ರಾರ್ಥಿಸಿದರು. ಎಂ.ಬಿ. ಹೊಸಳ್ಳಿ ನಿರೂಪಿಸಿದರು.
ಡಾ. ಬಸವರಾಜ ಜಗಜಂಪಿ, ಪ್ರೊ. ಎಂ.ಎಸ್. ಇಂಚಲ, ರಘು ಕಮ್ಮಾರ, ಪ್ರಕಾಶ ಗರುಡ, ಸಂಕೇತ ಪಾಟೀಲ, ಡಾ. ರಾಜಶೇಖರ ಎಚ್. ಬಿ., ಡಾ. ಗುರುಪಾದ ಮರಿಗುದ್ದಿ, ಬಿ. ಎಸ್. ಗವಿಮಠ, ಜ್ಯೋತಿ ಬದಾಮಿ, ಸಯ್ಯದ ಎನ್.ಆರ್., ಡಾ. ಸರಜೂ ಕಾಟ್ಕರ್, ಡಾ. ಶಾಮಸುಂದರ ಬಿದರಕುಂದಿ, ರಮೇಶ ಮಿರ್ಜಿ, ನಿರಜಾ ಗಣಾಚಾರಿ, ರಮೇಶ ಜಂಗಲ, ಡಾ. ಎನ್. ಎಸ್. ಶ್ರೀಧರಮೂರ್ತಿ, ಸುಮಾ ಕಿತ್ತೂರ, ಆಶಾ ಯಮಕನಮರ್ಡಿ, ಶ್ವೇತಾ ನರಗುಂದ, ಶೈಲಜಾ ಭಿಂಗೆ, ಡಾ. ರಾಮಕೃಷ್ಣ ಮರಾಠ, ಎನ್. ಬಿ. ದೇಶಪಾಂಡೆ, ಬಂಡು ಕುಲಕರ್ಣಿ, ಬಿ.ಕೆ. ಕುಲಕರ್ಣಿ, ಡಾ. ಪಿ.ಜಿ. ಕೆಂಪಣ್ಣವರ, ಶೈಲಜಾ, ಭಿಂಗೆ, ಜಯಶೀಲಾ ಬ್ಯಾಕೋಡ, ಎಂ. ಕೆ. ಹೆಗಡೆ, ಡಾ. ಶ್ರೀಧರ ಹುಕ್ಕೇರಿ, ಎಚ್, ಎಸ್, ದೇಶಪಾಂಡೆ, ಜಿ.ಎಸ್. ಸೋನಾರ, ತಾನಾಜಿ, ಗುಂಡೇನಟ್ಟಿ ಮಧುಕರ, ರಾಜಕುಮಾರ ಕುಂಬಾರ, ದೇವು ಪತ್ತಾರ, ದೀಪಿಕಾ ಚಾಟೆ, ಶ್ರದ್ಧಾ ಪಾಟೀಲ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದರು.
undefined

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲರಿಂದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಹೊಸ ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ